ಬಿಜಾಪುರದ ತಾಳಿಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಬಾಲಕಿಯರನ್ನೊಳಗೊಂಡ ತಂಡ ಪ್ರಥಮ🥇🏆 ಸ್ಥಾನ ಪಡೆದು ಆಂಧ್ರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತದೆ.
ವಿಜೇತ ತಂಡದ ಎಲ್ಲಾ ಆಟಗಾರರಿಗೆ ಮನದಾಳದ ಅಭಿನಂದನೆಗಳು 💐💐💐

ಮುಂಡಾಜೆ: ನಿವೃತ್ತ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರ
ಶ್ರೀಮತಿ ಜಾಲಿ ಓ ಎ ಅವರು ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ 1991ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ, 2004ರಿಂದ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ, ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಫೆ.28ರಂದು