ಶ್ರೀಮತಿ ಜಾಲಿ ಓ ಎ ಅವರು ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ 1991ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ, 2004ರಿಂದ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ, ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಫೆ.28ರಂದು ವಯೋ ನಿವೃತ್ತಿ ಹೊಂದಿದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಕಾರ್ಯದರ್ಶಿಯವರಾದ ಶ್ರೀ ಕೃಷ್ಣ ಭಟ್ ರವರು ನಿವೃತ್ತರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಖಜಾಂಚಿಯವರಾದ ಶ್ರೀ ಅಚ್ಯುತ ನಾಯಕ್, ಶತಾಬ್ದಿ ವಿದ್ಯಾಲಯ ಸಮಿತಿ ಮುಂಡಾಜೆಯ ಸಂಚಾಲಕರಾದ ಶ್ರೀ ನಾರಾಯಣ ಫಡ್ಕೆ, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆಯ ಅಧ್ಯಕ್ಷರಾದ ಶ್ರೀ ವಿನಯಚಂದ್ರ, ಸದಸ್ಯರಾದ ಶ್ರೀ ವಿಶ್ವನಾಥ ಶೆಟ್ಟಿ, ಶ್ರೀಮತಿ ಭಾರತಿ ಫಡ್ಕೆ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಸಹ ಪ್ರಾಧ್ಯಾಪಕರಾದ ಡಾ. ರವಿ ಎಂ. ಎನ್ ರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ಇತಿಹಾಸ ಉಪನ್ಯಾಸಕಿ ಶ್ರೀಮತಿ ಗೀತಾ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.